21st August 2025
ಚಡಚಣ : ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ಸಹಯೋಗದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯ ಕಾರ್ಯಕ್ರಮವನ್ನು ವಿಜಯಪುರದ ಕಂದಗಲ್ಲ ಶ್ರೀ ಹಣುಮಂತರಾಯ ರಂಗಮ0ದಿರದಲ್ಲಿ ಸೋಮವಾರ ಜರುಗಿತು.
ಈ ಸಂದರ್ಭದಲ್ಲಿ ಚಡಚಣ ತಾಲೂಕಿನ ಹಿರಿಯ ಛಾಯಾಗ್ರಾಹಕರು ಹಾಗೂ ಹೊಸದಿಗಂತ ಪತ್ರಿಕೆಯ ವರದಿಗಾರ ರಾಜಶೇಖರ ಡೋಣಜಮಠ ಅವರನ್ನು ಸನ್ಮಾನಿಸಲಾಯಿತು.ಅವರು ಸುಮಾರು ೨೫ ವರ್ಷಗಳ ಸೇವೆ ಸಲ್ಲಿಸಿದ್ದು ಅದರಲ್ಲಿ ವಿಶೇಷವಾಗಿ ಚಡಚಣ ತಾಲೂಕಿನ ಸಾರ್ವಜನಿಕರಿಗೆ ಪ್ರಪ್ರಥಮವಾಗಿ ಡಿಜಿಟಲ್ ಕಂಪ್ಯೂಟರ್ ಫೋಟೊ ಪರಿಚಯಿಸಿದವರು ಹಾಗೂ ಸೇವೆ ಸಲ್ಲಿಸಿದವರಾಗಿದ್ದಾರೆ.ಅವರ ಅವಿರತ ಸೇವೆಯನ್ನು ಕಂಡು ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯುವ ಭಾರತ್ ಸಮೀತಿಯ ಅಧ್ಯಕ್ಷರು,ಯುವಮುಖಂಡರು,ಹಾಗೂ ಹವ್ಯಾಸಿ ಛಾಯಾಗ್ರಾಹಕರಾದ ಉಮೇಶ ಕಾರಜೋಳ,ಖ್ಯಾತ ವಾಗ್ಮಿಗಳು ಅಂಕಣಕಾರ, ಹವ್ಯಾಸಿ ಛಾಯಾಗ್ರಾಹಕರಾದ ಚಕ್ರವರ್ತಿ ಸೂಲಿಬೆಲೆ,ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ನಿರ್ದೇಶಕರಾದ ನಾಗರಾಜ ಟಿ.ಸಿ.,ಯುವಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ),ಎಸ್.ಬಿ.ವಿಸ್ಡಮ್ ಅಕಾಡೆಮಿಯ ಸಂಸ್ಥಾಪಕರಾದ ಶರಣಯ್ಯ ಬಂಡಾರಿಮಠ, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಮೇಶ ಚವ್ಹಾಣ,ಚಡಚಣ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಸಂಜಯ ರೇವೆ, ಗುರುರಾಜ ಬಿದರಿ,ಪ್ರಕಾಶ ಹಿಪ್ಪರಗಿ,ವಿಶ್ವೇಶ್ವರಯ್ಯ ಮಠಪತಿ,ಕೋಲಾರದ ಹಣಮಂತ ಹೂಗಾರ,ಬಾಗೆವಾಡಿಯ ಅಶೋಕ ತೆಗ್ಗಳ್ಳಿ,ನೀಡೋಣಿಯ ನೇಮಿನಾಥ ನೇಜ,ತಿಕೋಟಾದ ಭೀಮಪ್ಪ ಬಸರಗಿ,ವಿಜಯಪುರ ಹಾಗೂ ಇನ್ನಿತರ ತಾಲೂಕಿನ ಸಂಘದ ಪದಾಧಿಕಾರಿಗಳು ಹಾಗೂ ಛಾಯಾಗ್ರಾಹಕರು ಇದ್ದರು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ